ಬ್ರೀಯಾನ್, ಮಾರ್ಸೆಲ್ ಲೂಯಿ
1854-1948. ಫ್ರೆಂಚ್ ಭೌತವಿಜ್ಞಾನಿ ಮತ್ತು ಗಣಿತವಿದ. ಜನನ 19-12-1854, ಮರಣ 16-6-1948. ಈತ ಸ್ಫಟಿಕ ದೃಗ್ವಿಜ್ಞಾನ ಕ್ಷೇತ್ರದಲ್ಲಿ ನಡೆಸಿದ ಅಧ್ಯಯನ ಮತ್ತು ಸಂಶೋಧನೆ ಬಲು ಮಹತ್ತ್ವದವು. ಏಕಾಕ್ಷೀಯ ಇಲ್ಲವೆ ದ್ವಿಅಕ್ಷೀಯ ಸ್ಫಟಿಕಗಳಲ್ಲಿ ಸಂಚರಣವಾಗುವ ವಿದ್ಯುತ್ಕಾಂತೀಯ ತರಂಗಗಳ ಸಮಸ್ಯೆಯನ್ನು ವಿಶೇಷವಾಗಿ ಅಧ್ಯಯನ ಮಾಡಿದ. ಬ್ರೀಯಾನ್ ಆವರಣಗಳು ಎಂಬ ಈತನ ಹೆಸರಿನ ಗಣಿತೀಯ ವಿಶ್ಲೇಷಣೆಯ ನೆರವಿನಿಂದ ಘನ ವಸ್ತುಗಳ ಗುಣ ಲಕ್ಷಣಗಳನ್ನು ಅರ್ಥವಿಸುವುದು ಸಾಧ್ಯವಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ